‘ಹ್ಯಾಪಿ ನ್ಯೂ ಇಯರ್ ಮೊದಲ ಹಂತ ಮುಗೀತು
Posted date: 06 Thu, Oct 2016 – 05:35:32 PM

ಸೌಮ್ಯ ಫಿಲ್ಮ್ಸ್ ಅವರ ವಿನೂತನ ಕಾಣಿಕೆ, ವನಜ ಪಾಟೀಲ್ ಅವರ ನಿರ್ಮಾಣದ ಚಿತ್ರ ‘ಹ್ಯಾಪಿ ನ್ಯೂ ಇಯರ್ ಮೂಲಕ ಸೃಷ್ಟಿ ಪಾಟೀಲ್ ನಾಯಕಿ ಆಗಿ ಪಾದಾರ್ಪಣೆ ಮಾಡುತ್ತಿದ್ದರೆ, ಹೆಸರಾಂತ ನಿರ್ದೇಶಕ ಟಿ ಎಸ್ ನಾಗಾಭರಣ ಅವರ ಪುತ್ರ ಪನ್ನಗ ಭರಣ ಅವರಿಗೆ ನಿರ್ದೇಶಕರಾಗಿ ಇದು ಮೊದಲ ಪ್ರಯತ್ನ.
 
ಪನ್ನಗ ಭರಣ ಪ್ರಕಾರ ಜೀವನ ಎಂಬುದು ಒಂದು ನಿರಂತರ ಪಯಣ. ಬದುಕಿನ ಪ್ರತೀಕ್ಷಣ ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ. ಆದರೆ ಬಹುತೇಕರು ಮುಖವಾಡ ಧರಿಸಿ ಬದುಕುವುದೇ ಹೆಚ್ಚು. ಈ ಚಿತ್ರ ಅಂತಹ ಐದು ವ್ಯಕ್ತಿಗಳ ಚಿತ್ರಣ. ಮೊದಲ ಹಂತದ ಚಿತ್ರೀಕರಣ ಬಿ ಸಿ ಪಾಟೀಲ್ ಅವರ ತವರಾದ ಹಿರೇಕೆರೂರು ತಾಲೂಕು ಸುತ್ತ ಮುತ್ತ ಮುಗಿಸಿಕೊಂಡು ಬಂದಿದೆ.
 ಇದೊಂದು ಸಂಪೂರ್ಣ ಮನರಂಜನೆ ನೀಡುವ ಹಾಸ್ಯಮಯ ಚಿತ್ರ. ಜೊತೆಗೆ ಬಹು ತಾರಗಣದ ಚಿತ್ರವೂ ಹೌದು. ವಿಜಯ್ ರಾಘವೇಂದ್ರ, ದಿಗಂತ್, ಧನಂಜಯ್, ಬಿ ಸಿ ಪಾಟೀಲ್, ಸಾಯಿಕುಮಾರ್, ಶ್ರುತಿ ಹರಿಹರನ್, ಸೋನು ಗೌಡ, ಸುಧಾರಾಣಿ, ಸೃಷ್ಟಿ ಪಾಟೀಲ್, ಮಾಳವಿಕ ಅವಿನಾಶ್, ರಾಕ್ಲೈನ್ ವೆಂಕಟೇಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ, ಮಾರ್ಗರೇಟ್ (ರಷ್ಯಾ ಮೂಲ) ಪಾತ್ರವರ್ಗದಲ್ಲಿ ಇದ್ದಾರೆ.
ಶ್ರೀಶ ಕುದುವಲ್ಲಿ ಛಾಯಾಗ್ರಹಣ, ರಘು ದೀಕ್ಷಿತ್ ಅವರ ಸಂಗೀತ, ಪನ್ನಗ ಭರಣ ಅವರಿಗೆ ಚಿತ್ರ ಕಥೆಯಲ್ಲಿ ಆದಿ ಶಂಕರ್, ಅವಿನಾಷ್ ಬಲೆಕ್ಕಳ ಸಹಾಯ ಮಾಡಿದ್ದಾರೆ. ಸಂಭಾಷಣೆಯನ್ನು ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಷ್ ಬಲೆಕ್ಕಳ ಬರೆದಿದ್ದಾರೆ.
ಸಚಿನ್ ಹೆಗ್ಗಾರ್ ವಸ್ತ್ರ ವಿನ್ಯಾಸ, ಮದನ್ ಹರಿಣಿ ಅವರ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ, ದಿನೇಶ್ ಮೇಕಪ್, ಇಸ್ಮೈಲ್ ಅವರ ಕಲೆ, ನರಸಿಂಹ ಜಾಲಹಳ್ಳಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed